ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ, ಅರೆಯೂರು, ತುಮಕೂರು

ಭಕ್ತರ ಅನುಭವಗಳು

ಶ್ರೀ ಯಲ್ಲಯ್ಯ,
ಸಿದ್ದಪ್ಪನ ಪಾಳ್ಯ,


ನನಗೆ 2002ನೇ ಇಸವಿಯಲ್ಲಿ (ನಮ್ಮ ಊರಿನ ಮಲ್ಲನರಸಯ್ಯನಿಗೆ ಕ್ಯಾನ್ಸರ್ ಖಾಯಿಲೆ ಬಂದ ಒಂದು ತಿಂಗಳ ನಂತರ) ಕ್ಯಾನ್ಸರ್ ಖಾಯಿಲೆಯಾಗಿ ಬೆಂಗಳೂರಿನ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿ 2-3 ತಿಂಗಳು ...

Latest News - ಸುದ್ಧಿಗಳು

  • Facebook: areyurutemples
  • Twitter: areyurutemples
  • External Link: areyurusuresh.blogspot.com

ಇದುವರೆಗಿನ ವೀಕ್ಷಕರ ಸಂಖ್ಯೆ

Content View Hits : 44401

ಲೈವ್ ವೆಬ್ ವೀಕ್ಷಕರ ಸಂಖ್ಯೆ

We have 52 guests online

Font Problem?

This Website is in KANNADA Language and uses UNICODE [UTF-8 encoding] Font for its contents display. If you unable to read the content, or the content displays like ??????? or □ □ □ □ □, please install / replace this TUNGA unicode font to your computer. Set your browser to UTF-8 Encoding. Please refer the corresponding manuals of your browsers and Suitable Unicode fonts installation instructions for your Operating Systems.

ಮುಖಪುಟ ಅರೆಯೂರಿಗೆ ಮಾರ್ಗಗಳು
ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಸನ್ನಿಧಿಗೆ ಸಾರಿಗೆ ಸೌಲಭ್ಯಗಳು

ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಠಾನವು ಕರ್ನಾಟಕ ರಾಜ್ಯದ ತುಮಕೂರು ತಾಲ್ಲೂಕಿನ ಹಚ್ಚ ಹಸುರಿನಿಂದಾವೃತವಾಗಿರುವ ಅರೆಯೂರು ಗ್ರಾಮದಲ್ಲಿದೆ. ತುಮಕೂರು ನಗರಕ್ಕೆ 16 ಕಿ.ಮೀ. ದೂರದಲ್ಲಿರುವ ಈ ಪ್ರಸಿದ್ಧ ಯಾತ್ರಾಸ್ಥಳವು ಬೆಂಗಳೂರು - ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ತುಮಕೂರಿನಿಂದ ಶಿವಮೊಗ್ಗದ ಕಡೆ ಕ್ರಮಿಸುವಾಗ ಸಿಗುವ ಮಲ್ಲಸಂದ್ರ ಗ್ರಾಮದಿಂದ ದಕ್ಷಿಣಕ್ಕೆ 8 ಕಿ.ಮೀ. ದೂರದಲ್ಲಿದೆ. ಮಲ್ಲಸಂದ್ರ ರೈಲು ನಿಲ್ದಾಣವೇ ಅರೆಯೂರಿನ ಸಮೀಪದ ರೈಲು ನಿಲ್ದಾಣವಾಗಿದ್ದು ಇಲ್ಲಿಂದ ದೇವಾಲಯಕ್ಕೆ ಹೋಗಿ ಬರಲು ಉತ್ತಮ ಡಾಂಬರು ರಸ್ತೆಯಿದ್ದು ಆಟೋ, ಟೆಂಪೋ ಅಥವಾ ಯಾವುದೇ ವಾಹನದಲ್ಲಿ ಬರಬಹುದು.


ಬೆಂಗಳೂರು ಕಡೆಯಿಂದ ಬರುವವರು, ಉತ್ತರ ಕರ್ನಾಟಕದಿಂದ ಬರುವವರು, ಆಂಧ್ರಪ್ರದೇಶದಿಂದ ಬರುವವರು, ತಮಿಳುನಾಡು - ಕೋಲಾರದ ಭಾಗದಿಂದ ಬರುವವರು ಇಲ್ಲಿಗೆ ಬರುವಾಗ ರಸ್ತೆಯ ಮೂಲಕ ತುಮಕೂರು ನಗರವನ್ನು ತಲುಪಿ ಅಲ್ಲಿಂದ ತುಮಕೂರು > ಮಲ್ಲಸಂದ್ರ > ಹಾಲನೂರು > ಅರೆಯೂರು ಮಾರ್ಗವಾಗಿ ಬರಬೇಕು ಅಥವಾ ಬೆಂಗಳೂರು > ನೆಲಮಂಗಲ > ಕುಣಿಗಲ್ > ಹೆಬ್ಬೂರು > ಸಿರಿವರದ ಮುಖಾಂತರವೂ ಅರೆಯೂರಿಗೆ ಬರಬಹುದು. ರೈಲಿನಲ್ಲಿ ಬರುವವರು ಬೆಂಗಳೂರು ಕಡೆಯಿಂದ ಮಲ್ಲಸಂದ್ರಕ್ಕೆ ಬಂದು ಅಲ್ಲಿಂದ ರಸ್ತೆ ಮುಖಾಂತರ ಮಲ್ಲಸಂದ್ರ > ಹಾಲನೂರು ಮಾರ್ಗವಾಗಿ ಅರೆಯೂರಿಗೆ ಯಾವುದೇ ವಾಹನದಲ್ಲಿ ಬರಬಹುದು.

ಮೈಸೂರು, ಮಂಗಳೂರು ಅಥವಾ ದಕ್ಷಿಣ ಕರ್ನಾಟಕ ಭಾಗದ ಜನರು ಅಥವಾ ಕೇರಳ ರಾಜ್ಯದಿಂದ ಭೇಟಿ ಕೊಡುವವರು ಇಲ್ಲಿಗೆ ಬರುವಾಗ ಮೈಸೂರು / ಮಂಗಳೂರು > ಕುಣಿಗಲ್ ತಲುಪಿ ಅಲ್ಲಿಂದ ಹೆಬ್ಬೂರು > ಸಿರಿವರದ ಮುಖಾಂತರ ಅರೆಯೂರಿಗೆ ರಸ್ತೆಯ ಮೂಲಕ ಬರಬೇಕು.

ಶಿವಮೊಗ್ಗ, ಚಿಕ್ಕಮಗಳೂರು ಇತ್ಯಾದಿ ಪಶ್ಚಿಮ ಕರ್ನಾಟಕದ ಭಾಗದಿಂದ ಬರುವವರು ಇಲ್ಲಿಗೆ ಬರುವಾಗ ರಸ್ತೆಯ ಮೂಲಕ ತಿಪಟೂರು > ಗುಬ್ಬಿ > ಮಲ್ಲಸಂದ್ರ > ಹಾಲನೂರು > ಅರೆಯೂರು ಮಾರ್ಗವಾಗಿ ಬರಬೇಕು. ರೈಲಿನಲ್ಲಿ ಬರುವವರು ಬೀರೂರು / ಅರಸೀಕೆರೆ > ತಿಪಟೂರು > ಅಮ್ಮಸಂದ್ರ > ಗುಬ್ಬಿ > ಮಲ್ಲಸಂದ್ರಕ್ಕೆ ಬಂದು ಅಲ್ಲಿಂದ ರಸ್ತೆ ಮುಖಾಂತರ ಮಲ್ಲಸಂದ್ರ > ಹಾಲನೂರು ಮಾರ್ಗವಾಗಿ ಅರೆಯೂರಿಗೆ ಯಾವುದೇ ವಾಹನದಲ್ಲಿ ಬರಬಹುದು.

ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಸನ್ನಿಧಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಸರ್ಕಾರಿ ಬಸ್‌ಗಳ ಸೌಲಭ್ಯಗಳು:

ಪ್ರತಿ ದಿನ ತುಮಕೂರಿನಿಂದ ಇಲ್ಲಿಗೆ ಬರಲು ನೇರ ಸಾರಿಗೆ ಸೌಲಭ್ಯವು ಇದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಸರ್ಕಾರಿ ಬಸ್‌ಗಳು ತುಮಕೂರು ಬಸ್ ನಿಲ್ದಾಣದಿಂದ ಅರೆಯೂರಿಗೆ ಪ್ರತಿ ಗಂಟೆಗೆ ಒಮ್ಮೆಬಂದು ಹೋಗುತ್ತವೆ. ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಬಸ್ಸುಗಳ ಸೌಲಭ್ಯ ಇದೆ.